http://mangalasatyan.tripod.lycos.com


ಅಂಜನಾಸುತನಿಗೆ ನಲವತ್ತು ನಮನಗಳು by Mrs.S. Mangala Satyan (ಎಸ್. ಮಂಗಳಾ ಸತ್ಯನ್) Kannada Novelist, 912, "Sree Ganesh", 5th Main, 1st Stage, Aravindanagar, Mysore-570023, Karnataka, India. (Ph.9448434550) E-Mail: esmangala@gmail.com; mangala_mys@yahoo.co.in Website: http://esmangala.wix.com/mangala-1940; http://mangalasatyan.tripod.com ಮಹಾಜ್ನಾನಿ ಗುಣನಿಧಿ ವೀರ ಹನುಮಾ| ಮೂರುಲೋಕದಲ್ಲೂ ನೀನೆ ತೇಜೋ ಮಹಿಮಾ| ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೧ || ಅಮಿತ ಪರಾಕ್ರಮಿ ನೀನೆ ರಾಮದೂತ | ವಾಯುಪುತ್ರ ನೀನೆ ಅಂಜನಾಸುತ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೨ || ವಜ್ರಕಾಯ ಹನುಮ ನೀನೆ ದುರುಳ ಶಿಕ್ಷಕ | ಸಜ್ಜನರ ಬಂಧು ನೀನೆ ಶಿಷ್ಟ ರಕ್ಷಕ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೩ || ಕರ್ಣಕುಂಡಲಧಾರಿ ಸ್ವರ್ಣಕಾಯನೆ | ಸುರುಳಿಕೇಶ ಸುಂದರಾ ವಾನರೇಶ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೪ || ನಿನ್ನ ಕರಗಳೊಳಗೆ ಇಹುದು ವಜ್ರಧ್ವಜಗಳು | ಉಡಿದಾರ ಮೌಂಜಿಯಾ ಬ್ರಹ್ಮಚಾರಿಯು | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೫ || ಸರ್ವ ಲೋಕ ವಂದಿತಾ ಕೇಸರೀಸುತ | ಸರ್ವ ಜನ ರಕ್ಷಕಾ ವೀರ ನಾಯಕಾ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೬ || ಸದಾ ಸಿದ್ಧ ಹಸ್ತ ನೀ ರಾಮ ಸೇವಕಾ | ಸಕಲ ಜ್ನಾನಿ ಗುಣಶೀಲ ಭಕ್ತಪಾಲಕಾ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೭ || ರಾಮನಾಮ ಆಲಿಸಲು ಸದಾ ನಿರತನು | ನಿನ್ನ ಹೃದಯದಲ್ಲಿ ಇಹರು ಸೀತಾ ರಾಮರು | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೮ || ಸೀತೆಗಾಗಿ ತೋರಿ ನೀನು ಸೂಕ್ಷ್ಮರೂಪವಾ | ಲಂಕೆಯಲಿ ತೋರಿ ನೀನು ಘೋರರೂಪವಾ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೯ || ರಾಮಕಾರ್ಯ ಚತುರ ನೀ ಭೀಮಕಾಯನು | ದೈತ್ಯ ಸಂಹಾರಿ ನೀನು ವೀರ ಹನುಮನೆ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೧೦ || ಲಕ್ಷ್ಮಣನಾ ಉಳಿಸಲೆಂದು ತಂದೆ ಮೂಲಿಕೆ | ಪಾತ್ರನಾದೆ ನೀನು ರಾಮನಂತರಾಳಕೆ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೧೧ || ನಿನ್ನ ಸೇವೆಯನ್ನು ಕಂಡು ರಾಮಚಂದ್ರನು | ಭರತಗೆ ಸರಿಸಾಟಿ ಎಂದು ತಿಳಿದನು | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೧೨ || ಹನುಮ ನಿನ್ನ ಪ್ರೇಮದಿಂದ ರಾಮ ತೃಪ್ತನು | ರಾಮ ಕೃಪೆಗೆ ಪಾತ್ರನಾದೆ ನೀನೆ ಧನ್ಯನು | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೧೩ || ಬ್ರಹ್ಮಪುತ್ರ ಆದಿಶೇಷ ಸನಕ ಮುನಿಗಳು | ದೇವಗಣಗಳೆಲ್ಲ ಸೇರಿ ಸ್ತುತಿಯ ಗೈದರು | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೧೪ || ವಾಯು ವರುಣ ಇಂದ್ರ ಅಗ್ನಿ ಯಮ ಕುಬೇರರು | ನಿನ್ನ ಮಹಿಮೆ ಹಾಡಿ ಹೊಗಳಿ ಹರುಷಪಟ್ಟರು | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು ||೧೫ || ಸುಗ್ರೀವನಿಗೆ ನೀನು ರಾಜ್ಯ ಕೊಡಿಸಿದೆ | ರಾಮ ಸುಗ್ರೀವರಲಿ ನೀನು ಸ್ನೇಹ ಬೆಳೆಸಿದೆ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೧೬ || ನೀ ಮಾಡೆ ಉಪದೇಶವ ವಿಭೀಷಣನಿಗೆ | ರಾಮನಿಂದ ಅರಸನಾದ ಅವನು ಲಂಕೆಗೆ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೧೭ || ಸೂರ್ಯನನ್ನು ಹಣ್ಣು ಎಂದು ನೀನು ತಿಳಿಯುತಾ | ಕ್ಷಣಮಾತ್ರದಿ ಆಗಸಕ್ಕೆ ನೀನು ಹಾರಿದೆ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೧೮ || ರಾಮಮುದ್ರಿಕೆ ಹಿಡಿದು ಜಲಧಿ ದಾಟಿದೆ | ಲೀಲಾತೀತ ಸ್ವಾಮಿ ನೀನು ಪರಮ ವೀರನೆ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೧೯ || ನಿನ್ನ ಕೃಪೆಯು ಒಂದೇ ಸಾಕು ಇದ್ದರೆಮಗೆ | ಸಕಲ ಕಾರ್ಯದಲ್ಲಿ ಸಿದ್ಧಿ ಹಲವು ಬಗೆಬಗೆ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೨೦ || ದಾಸನಾದೆ ಹನುಮ ನೀನು ರಾಮಚಂದ್ರಗೆ | ಪ್ರಭುವ ಕಾಣಬಹುದೆ ನೀನು ಕೃಪೆಯ ತೋರದೆ | ಹನುಮ ನಿನ್ನಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೨೧ || ರಾಮಭಕ್ತ ಹನುಮ ನೀನು, ನಿನಗೆ ಜಯ ಜಯ | ನೀನು ದಯವ ತೋರಲೆಮಗೆ ಇರುವುದೆ ಭಯ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೨೨ || ಅಮಿತ ಶೂರ ಧೀರ ನೀನು ಪರಮಪವಿತ್ರ | ಮೂರು ಲೋಕದಲ್ಲೂ ನೀನು ಪೂಜೆಗೆ ಪಾತ್ರ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೨೩ || ಶಕ್ತಿ ಯುಕ್ತಿ ಹನುಮ ನಿನ್ನ ದಿವ್ಯ ನಾಮವು | ಸ್ಮರಣೆಯಿಂದ ಭೂತ ಪ್ರೇತ ಬಾಧೆ ಕಳೆವುದು | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೨೪ || ಪವನ ಸುತನೆ ನಿನ್ನ ನಾಮ ರೋಗ ಕಳೆವುದು | ಬಿಡದೆ ಜಪಿಸುತಿರಲು ಸರ್ವ ಪೀಡೆ ನಾಶವು | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೨೫ || ಭಕ್ತಿಯಿಂದ ಪೂಜಿಸುವವರ ಕಷ್ಟ ಕಳೆಯುವೆ | ನಂಬಿದವರ ಕೈಯ ಬಿಡದೆ ನೀನು ಸಲಹುವೆ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೨೬ || ನಿನ್ನ ಸ್ವಾಮಿ ರಾಮಚಂದ್ರ ಸರ್ವ ರಕ್ಷಕ | ಅವನ ದಾಸ ಹನುಮ ನೀನು ಭಕ್ತ ಪಾಲಕ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೨೭ || ಕೋರುವವಗೆ ವರವ ಕೊಡುವ ದಯಾಸಾಗರ | ನಂಬಿದವರ ಬಾಳಿಗೆ ನೀನೇ ಆಧಾರ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೨೮ || ಯುಗ ಯುಗದಲೂ ತುಂಬಿಹುದು ನಿನ್ನ ಕೀರುತಿ | ಜಗದೊಳೆಲ್ಲ ಕಾಣುತಿಹುದು ನಿನ್ನ ಮೂರುತಿ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೨೯ || ಶಿಷ್ಟ ರಕ್ಷಕನು ನೀನು ದುಷ್ಟ ಶಿಕ್ಷಕ | ರಾಮನಿಗೆ ಪ್ರೀತಿಪಾತ್ರ ಹನುಮ ನಾಯಕ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೩೦ || ಸೀತೆ ಒಲಿದು ನಿನಗೆ ಇತ್ತ ಸಕಲ ಸಿದ್ಧಿಯಾ | ನಿನ್ನ ನಂಬಿದವರಿಗೆಲ್ಲ ನೀನು ನೀಡಿದೆ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೩೧ || ಹಗಲು ರಾತ್ರಿ ಹನುಮ ನಿನಗೆ ರಾಮಧ್ಯಾನವು | ಕರುಣಿಸೆಮಗೆ ಹನುಮ ನೀನು ಮಧುರನಾಮವ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೩೨ || ನಿನ್ನ ನಾವು ಪೂಜಿಸಿದರೆ ರಾಮನೊಲಿವನು | ಕರುಣೆಯಿಂದ ಅವನು ನಮ್ಮ ಪಾಪ ಕಳೆವನು | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೩೩ || ಜನುಮ ಜನುಮದಲ್ಲಿ ಮೋಕ್ಷಪಡೆದ ಭಕ್ತರು | ಸಲಹೆ ನೀನು ಆಗುವರು ರಾಮಭಕ್ತರು | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೩೪ || ಬೇಡ ಬೇಡ ಎಮಗೆ ಅನ್ಯ ದೈವದ ಚಿಂತೆ | ನೀನು ನಮಗೆ ಕರುಣೆ ತೋರೆ ಏತಕೆ ಚಿಂತೆ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೩೫ || ಹನುಮ ನೀನು ನಂಬಿದವರ ಕಷ್ಟ ಕಳೆಯುವೆ | ಕೋರಿದುದನು ನೀಡಿ ನೀನು ಪೀಡೆ ಹರಿಸುವೆ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೩೬ || ಧೀರ ನೀನು, ಶೂರ ನೀನು, ರಾಮನ ದೂತ | ಕೃಪೆಯ ಮಾಡಿ ಕರುಣೆ ತೋರು ಅಂಜನಾಸುತ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೩೭ || ನೂರು, ಮತ್ತೊಂದು ಬಾರಿ ಪಠಿಸೆ ಸ್ತೋತ್ರವ | ಅವರಿಗೆಲ್ಲ ಕೊಡುವೆ ನೀನು ಪರಮ ಮೋಕ್ಷವ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೩೮ || ನಿನ್ನ ಸ್ತೋತ್ರ ಹೇಳುವವಗೆ ಸಿದ್ಧಿ ಖಚಿತವು | ಸಾಕ್ಷಿ ಇಹುದು ಕೇಳು ಇದಕೆ ಹರನ ವಚನವು | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೩೯ || ಹರಿಯದಾಸ ತುಳಸಿದಾಸ ಇದನು ರಚಿಸಿದ | ಅವನ ಹೃದಯ ಮಂದಿರದಲ್ಲಿ ನಿನ್ನಯ ವಾಸ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೪೦ || ಬರೆದ ಗೋಸ್ವಾಮಿ ಇದನು ಎರಡು ವಿಂಶತಿ | ಇದನು ಪಠಣ ಮಾಡಿದಾಗ ಶೋಕ ಅವನತಿ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೪೧ || ಹನುಮ ನಿನ್ನ ಸ್ತುತಿಯ ಮಾಡೆ ಹರಿಯು ಒಲಿವನು | ಸಾಡೆಸಾತಿ ಎಲ್ಲ ದೋಷ ಅವನು ಕಳೆವನು | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೪೨ || ಹನುಮ ನಾನು ಬರೆದೆನಿದನು ತಾಯಿನುಡಿಯಲಿ | ನಿನ್ನ ಭಾಷೆ,ನಿನ್ನ ಸ್ತೋತ್ರ, ನಿನಗೆ ಅರ್ಪಣೆ | ಹನುಮ ನಿನ್ನ ಚರಣಕೆ ನನ್ನ ನಮನವು | ಹನುಮ ನಿನ್ನ ಚರಣಕೆ ನನ್ನ ನಮನವು || ೪೩ || = "ಸತ್ಯ" ನಿತ್ಯ, ಹನುಮ ನಮ್ಮ ಕಷ್ಟಕೆ ಅಂತ್ಯ| "ಸತ್ಯ" ದಲ್ಲಿ ನಡೆವರ ಬಾಳ್ "ಮಂಗಳ" ನಿತ್ಯ ||