KANNADA HANUMAN CHALISA-ANJANASUTHANIGE NALAVATTU NAMANAGALU


Home
Page Title

ಅಂಜನಾಸುತನಿಗೆ ನಲವತ್ತು ನಮನಗಳು (Hanuman Chalisa in Kannada) by Mrs.S. Mangala Satyan (ಎಸ್. ಮಂಗಳಾ ಸತ್ಯನ್) Kannada Novelist, 912, "Sree Ganesh", 5th Main, 1st Stage, Aravindanagar, Mysore-570023, Karnataka, India. (Ph.9448434550; 9342187774; 8277417217) E-Mail: esmangala@gmail.com; mangala_mys@yahoo.co.in Website: http://esmangala.wix.com/mangala-1940; http://mangalasatyan.tripod.com *** *** *** *** ಮಹಾಜ್ನಾನಿ ಗುಣನಿಧಿ ವೀರ ಹನುಮಾ| ಮೂರುಲೋಕದಲ್ಲೂ ನೀನೆ ತೇಜೋ ಮಹಿಮಾ| ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೧ || ಅಮಿತ ಪರಾಕ್ರಮಿ ನೀನೆ ರಾಮದೂತ | ವಾಯುಪುತ್ರ ನೀನೆ ಅಂಜನಾಸುತ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೨ || ವಜ್ರಕಾಯ ಹನುಮ ನೀನೆ ದುರುಳ ಶಿಕ್ಷಕ | ಸಜ್ಜನರ ಬಂಧು ನೀನೆ ಶಿಷ್ಟ ರಕ್ಷಕ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೩ || ಕರ್ಣಕುಂಡಲಧಾರಿ ಸ್ವರ್ಣಕಾಯನೆ | ಸುರುಳಿಕೇಶ ಸುಂದರಾ ವಾನರೇಶ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೪ || ನಿನ್ನ ಕರಗಳೊಳಗೆ ಇಹುದು ವಜ್ರಧ್ವಜಗಳು | ಉಡಿದಾರ ಮೌಂಜಿಯಾ ಬ್ರಹ್ಮಚಾರಿಯು | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೫ || ಸರ್ವ ಲೋಕ ವಂದಿತಾ ಕೇಸರೀಸುತ | ಸರ್ವ ಜನ ರಕ್ಷಕಾ ವೀರ ನಾಯಕಾ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೬ || ಸದಾ ಸಿದ್ಧ ಹಸ್ತ ನೀ ರಾಮ ಸೇವಕಾ | ಸಕಲ ಜ್ನಾನಿ ಗುಣಶೀಲ ಭಕ್ತಪಾಲಕಾ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೭ || ರಾಮನಾಮ ಆಲಿಸಲು ಸದಾ ನಿರತನು | ನಿನ್ನ ಹೃದಯದಲ್ಲಿ ಇಹರು ಸೀತಾ ರಾಮರು | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೮ || ಸೀತೆಗಾಗಿ ತೋರಿ ನೀನು ಸೂಕ್ಷ್ಮರೂಪವಾ | ಲಂಕೆಯಲಿ ತೋರಿ ನೀನು ಘೋರರೂಪವಾ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೯ || ರಾಮಕಾರ್ಯ ಚತುರ ನೀ ಭೀಮಕಾಯನು | ದೈತ್ಯ ಸಂಹಾರಿ ನೀನು ವೀರ ಹನುಮನೆ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೧೦ || ಲಕ್ಷ್ಮಣನಾ ಉಳಿಸಲೆಂದು ತಂದೆ ಮೂಲಿಕೆ | ಪಾತ್ರನಾದೆ ನೀನು ರಾಮನಂತರಾಳಕೆ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೧೧ || ನಿನ್ನ ಸೇವೆಯನ್ನು ಕಂಡು ರಾಮಚಂದ್ರನು | ಭರತಗೆ ಸರಿಸಾಟಿ ಎಂದು ತಿಳಿದನು | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೧೨ || ಹನುಮ ನಿನ್ನ ಪ್ರೇಮದಿಂದ ರಾಮ ತೃಪ್ತನು | ರಾಮ ಕೃಪೆಗೆ ಪಾತ್ರನಾದೆ ನೀನೆ ಧನ್ಯನು | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೧೩ || ಬ್ರಹ್ಮಪುತ್ರ ಆದಿಶೇಷ ಸನಕ ಮುನಿಗಳು | ದೇವಗಣಗಳೆಲ್ಲ ಸೇರಿ ಸ್ತುತಿಯ ಗೈದರು | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೧೪ || ವಾಯು ವರುಣ ಇಂದ್ರ ಅಗ್ನಿ ಯಮ ಕುಬೇರರು | ನಿನ್ನ ಮಹಿಮೆ ಹಾಡಿ ಹೊಗಳಿ ಹರುಷಪಟ್ಟರು | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು ||೧೫ || ಸುಗ್ರೀವನಿಗೆ ನೀನು ರಾಜ್ಯ ಕೊಡಿಸಿದೆ | ರಾಮ ಸುಗ್ರೀವರಲಿ ನೀನು ಸ್ನೇಹ ಬೆಳೆಸಿದೆ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನ್ನಯಾ ಚರಣಕೆ ನನ್ನ ನಮನವು || ೧೬ || ನೀ ಮಾಡೆ ಉಪದೇಶವ ವಿಭೀಷಣನಿಗೆ | ರಾಮನಿಂದ ಅರಸನಾದ ಅವನು ಲಂಕೆಗೆ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೧೭ || ಸೂರ್ಯನನ್ನು ಹಣ್ಣು ಎಂದು ನೀನು ತಿಳಿಯುತಾ | ಕ್ಷಣಮಾತ್ರದಿ ಆಗಸಕ್ಕೆ ನೀನು ಹಾರಿದೆ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೧೮ || ರಾಮಮುದ್ರಿಕೆ ಹಿಡಿದು ಜಲಧಿ ದಾಟಿದೆ | ಲೀಲಾತೀತ ಸ್ವಾಮಿ ನೀನು ಪರಮ ವೀರನೆ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೧೯ || ನಿನ್ನ ಕೃಪೆಯು ಒಂದೇ ಸಾಕು ಇದ್ದರೆಮಗೆ | ಸಕಲ ಕಾರ್ಯದಲ್ಲಿ ಸಿದ್ಧಿ ಹಲವು ಬಗೆಬಗೆ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೨೦ || ದಾಸನಾದೆ ಹನುಮ ನೀನು ರಾಮಚಂದ್ರಗೆ | ಪ್ರಭುವ ಕಾಣಬಹುದೆ ನೀನು ಕೃಪೆಯ ತೋರದೆ | ನಿನ್ನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೨೧ || ರಾಮಭಕ್ತ ಹನುಮ ನೀನು, ನಿನಗೆ ಜಯ ಜಯ | ನೀನು ದಯವ ತೋರಲೆಮಗೆ ಇರುವುದೆ ಭಯ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೨೨ || ಅಮಿತ ಶೂರ ಧೀರ ನೀನು ಪರಮಪವಿತ್ರ | ಮೂರು ಲೋಕದಲ್ಲೂ ನೀನು ಪೂಜೆಗೆ ಪಾತ್ರ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೨೩ || ಶಕ್ತಿ ಯುಕ್ತಿ ಹನುಮ ನಿನ್ನ ದಿವ್ಯ ನಾಮವು | ಸ್ಮರಣೆಯಿಂದ ಭೂತ ಪ್ರೇತ ಬಾಧೆ ಕಳೆವುದು | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೨೪ || ಪವನ ಸುತನೆ ನಿನ್ನ ನಾಮ ರೋಗ ಕಳೆವುದು | ಬಿಡದೆ ಜಪಿಸುತಿರಲು ಸರ್ವ ಪೀಡೆ ನಾಶವು | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೨೫ || ಭಕ್ತಿಯಿಂದ ಪೂಜಿಸುವವರ ಕಷ್ಟ ಕಳೆಯುವೆ | ನಂಬಿದವರ ಕೈಯ ಬಿಡದೆ ನೀನು ಸಲಹುವೆ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೨೬ || ನಿನ್ನ ಸ್ವಾಮಿ ರಾಮಚಂದ್ರ ಸರ್ವ ರಕ್ಷಕ | ಅವನ ದಾಸ ಹನುಮ ನೀನು ಭಕ್ತ ಪಾಲಕ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೨೭ || ಕೋರುವವಗೆ ವರವ ಕೊಡುವ ದಯಾಸಾಗರ | ನಂಬಿದವರ ಬಾಳಿಗೆ ನೀನೇ ಆಧಾರ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೨೮ || ಯುಗ ಯುಗದಲೂ ತುಂಬಿಹುದು ನಿನ್ನ ಕೀರುತಿ | ಜಗದೊಳೆಲ್ಲ ಕಾಣುತಿಹುದು ನಿನ್ನ ಮೂರುತಿ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೨೯ || ಶಿಷ್ಟ ರಕ್ಷಕನು ನೀನು ದುಷ್ಟ ಶಿಕ್ಷಕ | ರಾಮನಿಗೆ ಪ್ರೀತಿಪಾತ್ರ ಹನುಮ ನಾಯಕ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೩೦ || ಸೀತೆ ಒಲಿದು ನಿನಗೆ ಇತ್ತ ಸಕಲ ಸಿದ್ಧಿಯಾ | ನಿನ್ನ ನಂಬಿದವರಿಗೆಲ್ಲ ನೀನು ನೀಡಿದೆ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನ್ನಯಾ ಚರಣಕೆ ನನ್ನ ನಮನವು || ೩೧ || ಹಗಲು ರಾತ್ರಿ ಹನುಮ ನಿನಗೆ ರಾಮಧ್ಯಾನವು | ಕರುಣಿಸೆಮಗೆ ಹನುಮ ನೀನು ಮಧುರನಾಮವ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೩೨ || ನಿನ್ನ ನಾವು ಪೂಜಿಸಿದರೆ ರಾಮನೊಲಿವನು | ಕರುಣೆಯಿಂದ ಅವನು ನಮ್ಮ ಪಾಪ ಕಳೆವನು | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೩೩ || ಜನುಮ ಜನುಮದಲ್ಲಿ ಮೋಕ್ಷಪಡೆದ ಭಕ್ತರು | ಸಲಹೆ ನೀನು ಆಗುವರು ರಾಮಭಕ್ತರು | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೩೪ || ಬೇಡ ಬೇಡ ಎಮಗೆ ಅನ್ಯ ದೈವದ ಚಿಂತೆ | ನೀನು ನಮಗೆ ಕರುಣೆ ತೋರೆ ಏತಕೆ ಚಿಂತೆ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೩೫ || ಹನುಮ ನೀನು ನಂಬಿದವರ ಕಷ್ಟ ಕಳೆಯುವೆ | ಕೋರಿದುದನು ನೀಡಿ ನೀನು ಪೀಡೆ ಹರಿಸುವೆ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೩೬ || ಧೀರ ನೀನು, ಶೂರ ನೀನು, ರಾಮನ ದೂತ | ಕೃಪೆಯ ಮಾಡಿ ಕರುಣೆ ತೋರು ಅಂಜನಾಸುತ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೩೭ || ನೂರು, ಮತ್ತೊಂದು ಬಾರಿ ಪಠಿಸೆ ಸ್ತೋತ್ರವ | ಅವರಿಗೆಲ್ಲ ಕೊಡುವೆ ನೀನು ಪರಮ ಮೋಕ್ಷವ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೩೮ || ನಿನ್ನ ಸ್ತೋತ್ರ ಹೇಳುವವಗೆ ಸಿದ್ಧಿ ಖಚಿತವು | ಸಾಕ್ಷಿ ಇಹುದು ಕೇಳು ಇದಕೆ ಹರನ ವಚನವು | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೩೯ || ಹರಿಯದಾಸ ತುಳಸಿದಾಸ ಇದನು ರಚಿಸಿದ | ಅವನ ಹೃದಯ ಮಂದಿರದಲ್ಲಿ ನಿನ್ನಯ ವಾಸ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೪೦ || ಬರೆದ ಗೋಸ್ವಾಮಿ ಇದನು ಎರಡು ವಿಂಶತಿ | ಇದನು ಪಠಣ ಮಾಡಿದಾಗ ಶೋಕ ಅವನತಿ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೪೧ || ಹನುಮ ನಿನ್ನ ಸ್ತುತಿಯ ಮಾಡೆ ಹರಿಯು ಒಲಿವನು | ಸಾಡೆಸಾತಿ ಎಲ್ಲ ದೋಷ ಅವನು ಕಳೆವನು | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೪೨ || ಹನುಮ ನಾನು ಬರೆದೆನಿದನು ತಾಯಿನುಡಿಯಲಿ | ನಿನ್ನ ಸ್ತೋತ್ರ, ನಿನ್ನ ಭಾಷೆ, ನಿನಗೆ ಅರ್ಪಣೆ | ನಿನ್ನಯಾ ಚರಣಕೆ ನನ್ನ ನಮನವು | ನಿನ್ನಯಾ ಚರಣಕೆ ನನ್ನ ನಮನವು || ೪೩ || = "ಸತ್ಯ" ನಿತ್ಯ, ಹನುಮ ನಮ್ಮ ಕಷ್ಟಕೆ